ಪ್ರಪಂಚದ ಪ್ರಮುಖ ಮಹಾ ಸಾಗರಗಳು


━━━━━━━━━━━━━━━━━━━━
*ಪ್ರಪಂಚದ ಪ್ರಮುಖ ಮಹಾ ಸಾಗರಗಳು*
━━━━━━━━━━━━━━━━━━━━
1⃣. *ಪೆಸಿಫಿಕ್ ಸಾಗರ* - ಪ್ರಪಂಚದ ಅತ್ಯಂತ ದೊಡ್ಡ ಸಾಗರ. ಇದು ಅತ್ಯಂತ ಆಳವಾದ ಸಾಗರವಾಗಿದೆ. ಈ ಸಾಗರದಲ್ಲಿ ಅತಿ ಹೆಚ್ಚು ಸಂಖ್ಯೆಯ ದ್ವೀಪ ಸಮೂಹಗಳಿವೆ. ಅಮೆರಿಕಾ ಭೂಖಂಡಗಳ ಪಶ್ಚಿಮಕ್ಕೆ ಹಾಗೂ ಏಷ್ಯಾ ಮತ್ತು ಆಸ್ಟ್ರೇಲಿಯಾ ಭೂಖಂಡಗಳ ಪೂರ್ವದ ಪ್ರದೇಶವನ್ನು ವ್ಯಾಪಿಸಿದೆ. ಇದನ್ನು ಶಾಂತಸಾಗರ ಎಂದು ಕರೆಯುತ್ತಾರೆ. ಫೆಸಿಫಿಕ್ ಸಾಗರ ಎನ್ನುವ ಹೆಸರು ಲ್ಯಾಟಿನ್ ಭಾಷೆಯಿಂದ ಬಂದಿದೆ.

2⃣. *ಅಟ್ಲಾಂಟಿಕ್ ಸಾಗರ*- ಎರಡನೇ ಅತಿ ದೊಡ್ಡ ಸಾಗರವಾಗಿದೆ. ಬೂಮಿಯ ಐದನೇ ಒಂದು ಭಾಗವನ್ನು ಆವರಿಸಿದೆ. ಅಮೆರಿಕಾ ಭೂಖಂಡಗಳ ಮತ್ತು ಯೂರೋಪ್ ಹಾಗೂ ಆಫ್ರಿಕಾ ಖಂಡಗಳ ನಡುವೆ ವ್ಯಾಪಿಸಿದೆ.

3⃣. *ಹಿಂದೂ ಮಹಾಸಾಗರ* –ಭೂಮಿಯ ಮೂರನೇ ದೊಡ್ಡ ಮಹಾಸಾಗರ. ದೇಶವೊಂದರ ಹೆಸರಿನಿಂದ ಕರೆಯಲ್ಪಡುವ ಏಕೈಕ ಸಾಗರ. ಹಿಂದೂ ಮಾಹಾಸಾಗರದಲ್ಲಿ ಅತ್ಯಂತ ಉದ್ದವಾದ ಕಡಲ ತೀರವನ್ನು ಹೊಂದಿರುವ ದೇಶ ಭಾರತ.

4⃣. *ದಕ್ಷಿಣ ಮಹಾಸಾಗರ* – ಅಂಟಾಕ್ರ್ಟಿಕ ಖಂಡವನ್ನು ಸುತ್ತುವರೆದಿರುವ ಸಾಗರವಾಗಿದೆ. ಇದನ್ನು ಅಂಟಾರ್ಟಿಕ ಸಾಗರವೆಂದು ಕರೆಯುತ್ತಾರೆ.

5⃣. *ಆರ್ಕಾಟಿಕ್ ಸಾಗರ* - ಈ ಸಾಗರ ಅತಿ ಶೀತಲ ಸಾಗರವಾಗಿದೆ. ಪ್ರಪಂಚದ ಅತ್ಯಂತ ಚಿಕ್ಕ ಸಾಗರವಾಗಿದೆ.
━━━━━━━━━━━━━━━━━━━━

Comments

Post a Comment

Popular posts from this blog

ಪ್ರಪಂಚದ ಸರೋವರಗಳು ಮತ್ತು ದೇಶಗಳು

ಪ್ರಪಂಚದ ಪ್ರಮುಖ ಸಸ್ಯವರ್ಗಗಳು